ನಗರದ ಎಪಿಎಂಸಿಯಲ್ಲಿ ಸರಣಿ ಕಳ್ಳತನ ಇಲ್ಲಿದೆ ನೂಡಿ

ಮೈಸೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಣಿಗಳ್ಳತನ ನಡೆದಿದೆ. ಒಟ್ಟು 3 ಅಂಗಡಿಗಳ ಬಾಗಿಲುಗಳನ್ನು ಮೀಟಿದ್ದರೆ, ಮತ್ತೆರಡು ಅಂಗಡಿಗಳ ಬಾಗಿಲು ಒಡೆಯಲು ಕಳ್ಳರು ಯತ್ನಿಸಿದ್ದಾರೆ. ಇದು ಮಾರುಕಟ್ಟೆಯಲ್ಲಿರುವ ಅಂಗಡಿ ಮಾಲೀಕರ ಆತಂಕಕ್ಕೆ ಕಾರಣವಾಗಿದೆ. ಎಲ್ಲ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದ ಹಣ ಇಟ್ಟಿರಲಿಲ್ಲ. 500ರಿಂದ 2 ಸಾವಿರದವರೆಗೆ ಮಾತ್ರ ಹಣ ಇಟ್ಟಿದ್ದರು.ಹೆಚ್ಚಿನ ಹಣ ಕಳ್ಳರ ಕೈಸೇರಿಲ್ಲ. ಇವುಗಳಲ್ಲಿ 3 ದಿನಸಿ ಅಂಗಡಿಗಳು, 2 ತಂಪು ಪಾನೀಯ ಅಂಗಡಿಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಗಳಲ್ಲಿ ಕಳ್ಳರ ಕೃತ್ಯಗಳು ದಾಖಲಾಗಿವೆ. ಕೆಲವು ಸಿಸಿಟಿವಿಗಳನ್ನು ಕಳ್ಳರು ಒಡೆದು ಹಾಕಿದ್ದಾರೆ. ರಾತ್ರಿ 12. 50ಕ್ಕೆ ಕೃತ್ಯ ಆರಂಭಿಸಿದ ಕಳ್ಳರು ನಸುಕಿನ 2. 45 ತನಕ ಅಲ್ಲೇ ಸುತ್ತಾಡಿ ರುವ ಕುರಿತು ಸಿಸಿಟಿವಿಗಳಲ್ಲಿ ದೃಶ್ಯಗಳು ದಾಖಲಾಗಿವೆ

No comments:

Post a Comment