ಅಧ್ಯಕ್ಷ ಶಂಕರ್ ನಾಯಕ್ ಸಂಸ್ಥೆಯು ನೀಡುತ್ತಿರುವ ಲಾಭಾಂಶದ ನಗದು ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು

 


ದೊಡ್ಡ ಕವಲಂದೆ ಯಲ್ಲಿ ಧರ್ಮಸ್ಥಳ ಸಂಸ್ಥೆ ವತಿಯಿಂದ ಲಾಭಾಂಶ ವಿತರಣೆ

ನಂಜನಗೂಡು ತಾಲೂಕು ದೊಡ್ಡ ಕವಲಂದೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಜ್ಯೋತಿ ಬೆಳಗುವುದರ ಮೂಲಕ ಲಾಭಾಂಶ ವಿತರಣೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಬಳಿಕ ಮಾತನಾಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ಸಂಸ್ಥೆಯು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರೇಟ್ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಕೂಲಿ ಕಾರ್ಮಿಕರು ಬಡವರು ರೈತರು ಮಹಿಳೆಯರು ಸಂಘದ ಉಳಿತಾಯ ಹಾಗೂ ವ್ಯವಹಾರದಿಂದ ಬಂದ ಲಾಭಾಂಶವನ್ನು ಹತ್ತು ವರ್ಷಗಳಿಗೊಮ್ಮೆ ನೀಡುತ್ತಿದ್ದು  ಸದರಿ ಲಾಕ್ಡೌನ್ ಇರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ಲಾಭಂಶ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು

ನಮ್ಮ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಕೃಷಿ ಹೈನುಗಾರಿಕೆ ವಾಹನ ಖರೀದಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕೊಡಿಸುವುದಾಗಿ ತಿಳಿಸಿದರು


ನಂತರ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್ ನಾಯಕ್ ಸಂಸ್ಥೆಯು ನೀಡುತ್ತಿರುವ ಲಾಭಾಂಶದ ನಗದು ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು 

ಅರ್ಚನಾ ರಮೇಶ್ ಮಾತನಾಡಿ ನಮ್ಮ ಸಂಸ್ಥೆಯು ಕವಲಂದೆ ವಲಯಕ್ಕೆ ಸಂಬಂಧಿಸಿದಂತೆ 233 ಸಂಘಗಳಿಗೆ ಎಂಬತ್ತು ಲಕ್ಷ ರೂಗಳನ್ನು ವಿತರಣೆ ಮಾಡಲಾಗುತ್ತಿದೆ ಸಂಸ್ಥೆಯು ಮುಸ್ಲಿಂ ಬಾಂಧವರ ಸಂಘ ಹೈಮಾನ್ ಸಂಘಕ್ಕೆ 62 834 ನಿಮಿಷಾಂಬ ಸಂಘಕ್ಕೆ 50643 ನಗದು ಹಣವನ್ನು ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಆನಂದಗೌಡಎ ಎಸ್ ಐ ಮಂಜುನಾಥ್  ಸೇವಾ ಪ್ರತಿನಿಧಿ ರೇಣುಕಾ ರಾಜಮ್ಮ ಸಂಘದ ಪ್ರತಿನಿಧಿಗಳು ಮಂಜುಳಾ ಶಿವಲಿಂಗಮ್ಮ ಜಯಮ್ಮ ಮುಂತಾದವರು ಭಾಗವಹಿಸಿದರು

No comments:

Post a Comment