*ಲಾಕ್ಡೌನ್ ಸಡಿಲಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಹೆಬ್ಬಾರ್ ಮಾತು; ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ*

ಶಿರಸಿ: ಜಿಲ್ಲೆಯ ಎಲ್ಲ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ, ಭಟ್ಕಳ ಕಂಟೋನ್ಮೆಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ವರೆಗೆ ಹಾಗು ಗ್ರಾಮಾಂತರದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಕೇಂದ್ರ ಸರಕಾರದ ನಿಯಮಾವಳಿಗೆ ಅನ್ವಯವಾಗುವಂತೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ನಗರದ ಅರಣ್ಯ ವಸತಿಗೃಹದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಭಟ್ಕಳದಲ್ಲಿನ ಕಟೋನ್ಮೆಂಟ್ ಝೋನ್ ಹೊರತುಪಡಿಸಿ, ಜಿಲ್ಲೆಯ ಉಳಿದೆಡೆಗೆ ಅನ್ವಯವಾಗುವಂತೆ ಸಂಜೆ 7 ರಿಂದ ಬೆಳಿಗ್ಗೆ 7 ರ ವರೆಗೆ ಗ್ರಾಮಾಂತರ ಮತ್ತು ನಗರ ಯಾವುದೇ ಅಂಗಡಿಗಳು ತೆರೆಯುವಂತಿಲ್ಲ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ವರೆಗೆ ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಅವಕಾಶ ನೀಡಲಾಗಿದೆ.

ಮೇ.4 ರಿಂದ ಮೇ.17 ರ ವರೆಗೆ ಈ ಎಲ್ಲ ನಿಯಮಗಳು ಜಾರಿಯಲ್ಲಿರುತ್ತದೆ.
ಆಟೋರಿಕ್ಷಾಗಳಲ್ಲಿ ಒಬ್ಬ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದು, ದೋಬಿ, ಸಲೂನ್ , ಬ್ಯೂಟಿ ಪಾರ್ಲರ್ , ಐಸ್ ಕ್ರೀಮ್ ಪಾರ್ಲರ್ ಗಳಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಜಿಲ್ಲೆಯಲ್ಲಿ ಭಟ್ಕಳವನ್ನು ಹೊರತುಪಡಿಸಿ ಬುಧವಾರದಿಂದ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಸಾಮಾಜಿಕ ಅಂತರವನ್ನು ಕಾಪಾಡುವುದು ಅನಿವಾರ್ಯ.

ಹೊಟೆಲ್ ಗಳಲ್ಲಿ ಕುಳಿತು ತಿನ್ನಲು ಯಾವುದೇ ರೀತಿಯಲ್ಲಿ ಅವಕಾಶ ಇರುವುದಿಲ್ಲ. ಆದರೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ವರೆಗೆ ಮಾತ್ರ ಪಾರ್ಸಲ್ ನೀಡಲು ಅವಕಾಶ ನೀಡಲಾಗಿದೆ.

ಬಾರ್ ಗಳಿಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ತೆರೆಯಲು ಅವಕಾಶವಿದೆ. ಟೇಲರ್ ಶಾಪ್, ಹೇರ್ ಸಲೂನ್, ದೋಬಿ, ಐಸ್ ಕ್ರೀಮ್ ಪಾರ್ಲರ್ ಗಳು ಸೇರಿದಂತೆ ಇನ್ನಿತರ ಎಲ್ಲ ಅಂಗಡಿ-ಮುಂಗಟ್ಟುಗಳಿಗೆ ಮಧ್ಯಾಹ್ನ 1 ರ ವರೆಗೆ ತೆರೆಯಬಹುದಾಗಿದೆ.

ಗೋವಾದಿಂದ ಜಿಲ್ಲೆಗೆ ಆಗಮಿಸಲು ಕಾಯುತ್ತಿರುವವರ 10,000 ಕ್ಕೂ ಹೆಚ್ಚು ಜನರಿಗೆ ಸಿಹಿಸುದ್ದಿ ನೀಡಿದ್ದು, ಮಂಗಳವಾರ ಮಧ್ಯಾಹ್ನದೊಳಗೆ ಗೋವಾದಿಂದ ಜಿಲ್ಲೆಗೆ ಬರಲು ವ್ಯವವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಮಂಗಳವಾರದಿಂದ ಮರಳು ಸಾಗಾಣಿಗೆಕೆ ಅವಕಾಶ ಕಲ್ಪಿಸಲಾಗಿದ್ದು, ಪೆಟ್ರೋಲ್ ಪಂಪ್ ಮುಂಚಿನಂತೆ 24 ಘಂಟೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿದೆ ಎಂದರು.

ಕೊವಿಡ್ 19 ಹಿನ್ನಲೆಯಲ್ಲಿ ಜಾಗೃತಿ ವಹಿಸುವ ಅನಿವಾರ್ಯತೆ ನಮ್ಮೆದುರು ಇದೆ. ಜನರು ಜಿಲ್ಲಾಡಳಿತದ ಜೊತೆ ಕೈಜೋಡಿಸುವ ಅವಶ್ಯಕತೆ ಇದೆ. ಮುಂಬರುವ ಸೂಚನೆಯ ವರೆಗೆ ಈ ಎಲ್ಲ ನಿಯಮಾವಳಿಗಳು ಚಾಲ್ತಿಯಲ್ಲಿರುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಹರೀಶಕುಮಾರ, ಸಿಇಓ ರೋಷನ್, ಪೋಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಡಿಎಸ್ಪಿ ಗೊಪಾಲಕೃಷ್ಣ ನಾಯಕ ಇದ್ದರು.

ರಿಯಾಜ ಅಹ್ಮದ್ ಇಟ್ಟಂಗಿವಾಲೆ
ಸಮ್ಜೋ ಭಾರತ ಆನ ಲ್ಯಾನ ನ್ಯೂಜ

No comments:

Post a Comment