ದೊಡ್ಡ ಕವಲಂದೆ SSLC ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ PDO ಪುರುಷೋತ್ತಮ್ ನಂಜನಗೂಡು ತಾಲೂಕು ದೊಡ್ಡ ಕವಲಂದೆ

 


ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಹಾಗೂ ಕಲರ್ ಪ್ರಿಂಟರ್ ನೀಡಿ ಮಾತನಾಡಿದ ಪುರುಷೋತ್ತಮ್ ವಿದ್ಯಾರ್ಥಿಗಳು ಯಾವುದೇ ಕೊರನಾ ಸೋಂಕಿಗೆ ಭಯಪಡದೆ ಪರೀಕ್ಷೆ ಬರೆಯ ಬೇಕೆಂದು ಆತ್ಮಸ್ಥೈರ್ಯ ತುಂಬಿದರು

ನಂತರ ಮಾತನಾಡಿದ ಉಪಪ್ರಾಂಶುಪಾಲ ಜೆ.ರಾಜು ನಮ್ಮ ಶಾಲೆಯಲ್ಲಿ ಒಟ್ಟು 121 ಮಕ್ಕಳು ಪರೀಕ್ಷೆಗೆ ತಯಾರಾಗಿದ್ದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಿದ್ದು ಶಾಲೆಗೆ ಸ್ಯಾನಿಟೈಸರ್ ಮಕ್ಕಳಿಗೆ ಮಾಸ್ಕ್ ಪ್ರತಿ ಬೆಂಚಗೂ 2 ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಯಲು ಅನುವುಮಾಡಿಕೊಡಲಾಗಿದೆ ಪರೀಕ್ಷೆಯ ದಿನ ಆಶಾ ಕಾರ್ಯಕರ್ತರು ವೈದ್ಯಾಧಿಕಾರಿಗಳು ಹಾಜರಿದ್ದು ಯಾವುದಾದರೂ ಮಗುವಿಗೆ ಸೋಂಕು ಕಂಡಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದರು

ಮುಖಂಡರಾದ ರಾಜೇಶ್ ಮನೋಜ್ ಶಿಕ್ಷಕರಾದ ಅರ್ಚನಾ ಅನಿಲ್ ಕುಮಾರ್ ಕೆಂಪರಾಜು ಮಧುಶ್ರೀ ವಾಸವಾಂಬ ಶಶಿಕಲಾ ಜನಾರ್ಧನ್ ಬಾಲಸುಬ್ರಹ್ಮಣ್ಯ ವಿದ್ಯಾರ್ಥಿಗಳು ಹಾಜರಿದ್ದರು


No comments:

Post a Comment