ಯತೀಂದ್ರ ಸಿದ್ದರಾಮಯ್ಯ ಅವರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು

ನಂಜನಗೂಡು-ವರುಣ ವಿಧಾನಸಭಾ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮ ಗಳಿಗೆ ವರುಣ ಕ್ಷೇತ್ರದ ಶಾಸಕ ಡಾ ಯತಿಂದ್ರ ಸಿದ್ದರಾಮಯ್ಯರವರು ಚಾಲನೆ ನೀಡಿದರು. ಕೋಣನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಗುದ್ದಲಿ ಪೂಜೆ ಮತ್ತು ಶಾಲಾ ಕಟ್ಟಡದ ಉದ್ಘಾಟನೆ, ಕೋಣನಪುರ ಗ್ರಾಮದಲ್ಲಿ ಶಾಲೆ ಕಟ್ಟಡ, ಚಿಕ್ಕ ಹೊಮ್ಮ ಗ್ರಾಮದಲ್ಲಿ ಕನಕ ಭವನ ಗುದ್ದಲಿ ಪೂಜೆ, ದಾಸನೂರು ಗ್ರಾಮದಲ್ಲಿ ವಾಲ್ಮೀಕಿ ಭವನ ಉದ್ಘಾಟನೆ ಮತ್ತು ಕಾಲೇಜು ಕಟ್ಟಡದ ಗುದ್ದಲಿ ಪೂಜೆ ಹಾಗೂ ಕೃಷಿ ಇಲಾಖೆ ಕಾರ್ಯಕ್ರಮಗಳಿಗೆ ಚಾಲನೆ, ಪಿ ಮರಳ್ಳಿ ಗ್ರಾಮದಲ್ಲಿ ಬಸವಭವನ ಉದ್ಘಾಟನೆ, ಹನುಮನಪುರ ಗ್ರಾಮದಲ್ಲಿ ನೀರಾವರಿ ಇಲಾಖೆಯ ವತಿಯಿಂದ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ಮತ್ತು ಅಂಬೇಡ್ಕರ್ ಭವನದ ಗುದ್ದಲಿ ಪೂಜೆ ಹಾಗೂ ಹನುಮನಪುರ ಪಿ ಮರಳ್ಳಿ ಮಾರ್ಗ ಹೊಮ್ಮ ರಸ್ತೆಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೋಣನೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಪವಿತ್ರ ಬಸವಣ್ಣ, ಮಾಜಿ ಅಧ್ಯಕ್ಷ ಕೆ ಜಿ ಮಂಜು, ತಾಲೂಕು ಪಂಚಾಯತ್ ಉಪಾಧ್ಯಕ್ಷ ಸಿಎಂ ಮಹಾದೇವಯ್ಯ, ಹಾಡ್ಯ ರಂಗಸ್ವಾಮಿ, ಬಿ ಇ ಒ ಸಿ ಎನ್ ರಾಜು, ಎ ಇ ಇ ಸಣ್ಣ ನರಸಪ್ಪ, ಸಿ ಆರ್ ಪಿ ಥಾಂಡವಮೂರ್ತಿ, ಬಿ ಆರ್ ಪಿ ಮಧುಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷ ದೊಡ್ಡ ಬಸವಣ್ಣ, ಕವಲಂದೆ ಪಿ ಎಸ್ ಐ ಮಹೇಂದ್ರ, ಮುಖ್ಯ ಶಿಕ್ಷಕ ಡಿ ರಂಗಸ್ವಾಮಿ, ಗುತ್ತಿಗೆದಾರ ಕಿರಣ್ ಕುಮಾರ್, ಪುಟ್ಟರಂಗಯ್ಯ, ಪಿ ಡಿ ಒ ಜ್ಯೋತಿ ಸೇರಿದಂತೆ ಇತರರು ಇದ್ದರು.

No comments:

Post a Comment